ಭೂವೈಜ್ಞಾನಿಕ ನಕ್ಷೆ -
	ಭೂಮಿಯ ಮೇಲ್ಭಾಗದಲ್ಲಿಯ ಶಿಲೆಗಳ ಹರವು ಮತ್ತು ಅವುಗಳ ರಚನಾ ವೈವಿಧ್ಯ ಚಿತ್ರಿಸಿರುವ ನಕ್ಷೆ (ಜಿಯೊಲಾಜಿಕಲ್ ಮ್ಯಾಪ್). ಈ ನಕ್ಷೆಗಳು ಅವುಗಳ ಮೇಲೆ ನಮೂದಾಗಿರುವ ವಿವಿಧ ಶಿಲೆಗಳ ಪರಸ್ಪರ ಪ್ರಾಯವನ್ನೂ ಭೂಮಿಯ ಒಳಗೆ ಅವು ಪ್ರದರ್ಶಿಸುವ ರಚನೆಯನ್ನೂ ಸೂಚಿಸುತ್ತವೆ. ಸಾಮಾನ್ಯವಾಗಿ ಪ್ರದೇಶವೊಂದರ ಮೇಲ್ಮೈಲಕ್ಷಣವನ್ನು ಸೂಚಿಸುವ ನಕ್ಷೆಯ (ಟೋಪೋಗ್ರಫಿಕ್ ಮ್ಯಾಪ್) ಮೇಲೆ ಆ ಭಾಗದಲ್ಲಿ ಕಾಣಬರುವ ಶಿಲಾವರ್ಗ, ಅವುಗಳ ರಚನೆ ಮುಂತಾದವನ್ನು ಗುರುತಿಸಲಾಗುವುದು.

	ನಕ್ಷೆಯ ಮೇಲೆ ಗುರುತಿಸಿರುವ ಶಿಲಾವರ್ಗಗಳಿಗೆ ಶಿಲಾಸಮೂಹಗಳೆಂದು (ಫಾರ್ಮೇಷನ್ಸ್) ಹೆಸರು. ಈ ಬಗೆಯ ನಿರ್ದಿಷ್ಟ ವರ್ಗವೊಂದರ ಮೇಲು ಮತ್ತು ಕೆಳಭಾಗದ ಮೇರೆಗಳನ್ನು ಗುರುತಿಸುವುದು ಸುಲಭ. ಸಾಮಾನ್ಯವಾಗಿ ಇಂಥವನ್ನು ಅವು ಎಲ್ಲಿ ಚೆನ್ನಾಗಿ ಕಂಡುಬರುತ್ತವೋ ಅಂಥ ಸ್ಥಳ ಮತ್ತು ಅವುಗಳಲ್ಲಿರುವ ಮುಖ್ಯ ಶಿಲಾವರ್ಗಗಳನ್ನು ಅನುಸರಿಸಿ ಹೆಸರಿಸಲಾಗುವುದು. ಉದಾಹರಣೆಗೆ ಕ್ಲೋಸ್‍ಪೇಟೆ ಗ್ರ್ಯಾನೈಟ್. ಐಮಂಗಲ ಕಂಗ್ಲಾಮರೇಟ್, ಧಾರವಾಡ ಪದರುಶಿಲೆ ಇಂಥ ಹೆಸರುಗಳನ್ನು ಕರ್ನಾಟಕ ರಾಜ್ಯದ ಭೂಚರಿತ್ರೆಯಲ್ಲಿ ಕಾಣಬಹುದು. ಕರ್ನಾಟಕದ ಉತ್ತರ-ದಕ್ಷಿಣ ಬೆಟ್ಟಗಳ ಸಾಲಿನೋಪಾದಿಯಲ್ಲಿ ಗ್ರ್ಯಾನೈಟ್ ಕಣಶಿಲೆ ಹಬ್ಬಿದ್ದರೂ ಅದು ಕ್ಲೋಸ್‍ಪೇಟೆಯ (ಈಗಿನ ರಾಮನಗರ) ಸುತ್ತಮುತ್ತಲಿರುವುದರಿಂದ ಅದಕ್ಕೆ ಕ್ಲೋಸ್‍ಪೇಟ್‍ಗ್ರ್ಯಾನೈಟ್ ಎಂದು ಹೆಸರಾಗಿದೆ. ತುಮಕೂರು, ಕಂಡುಬರು ಪಾವಗಡ ಮುಂತಾದ ಕಡೆಗಳಲ್ಲಿಯ ಈ ಶಿಲೆಯ ಬೆಟ್ಟಗಳನ್ನು ತುಮಕೂರು ಗ್ರ್ಯಾನೈಟ್, ಪಾವಗಡ ಗ್ರ್ಯಾನೈಟ್ ಎಂದು ಕರೆಯದೆ ಕ್ಲೋಸ್‍ಪೇಟೆ ಗ್ರ್ಯಾನೈಟ್ ಎಂದೇ ಕರೆದಿದೆ. ಚಿತ್ರದುರ್ಗ ಜಿಲ್ಲೆಯ ಐಮಂಗಲದ ಬಳಿ ಕದಂಬ ಶಿಲೆಯ ಶಿಲಾಜಾಡು ಪ್ರಮುಖವಾಗಿ ಕಂಡುಬರುತ್ತದೆ. ಜಿಲ್ಲೆಯ ಇತರ ಕಡೆಗಳಲ್ಲೂ ಇದು ಕಂಡುಬರುತ್ತದಾದರೂ ಐಮಂಗಲ ಕಂಗ್ಲಾಮರೇಟ್ ಎಂದೇ ಇದನ್ನು ಗುರುತಿಸಲಾಗುತ್ತದೆ. ಈ ಜಾಡನ್ನು ಕರ್ನಾಟಕದ ಆರ್ಷೇಯಶಿಲಾಸಮುದಾಯದ ವರ್ಗೀಕರಣದಲ್ಲಿ ಬಳಸಿದೆ.

	ರೂಪಾಂತರಶಿಲೆಗಳಿಗೂ ಇದೇ ತತ್ತ್ವವನ್ನು ಅನುಸರಿಸಲಾಗಿದೆ. ಪದರುಶಿಲೆ ಕೂಡ ಇದೇ ವರ್ಗಕ್ಕೆ ಸೇರುತ್ತದೆ. ಇದು ಕರ್ನಾಟಕದ ಉದ್ದಕ್ಕೂ ಕ್ಲೋಸ್‍ಪೇಟೆ ಗ್ರ್ಯಾನೈಟ್ ಜಾಡಿಗೆ ಸಮಾಂತರವಾಗಿ ಹಬ್ಬಿಕೊಂಡಿದೆ. ಮೊತ್ತಮೊದಲಿಗೆ ಇದನ್ನು ಧಾರವಾಡದ ಬಳಿ ಗುರುತಿಸಿದ್ದರಿಂದ ಧಾರವಾಡ ಪದರುಶಿಲೆ ಎಂದೇ ಕರೆಯಲಾಯಿತು.

	ಶಿಲಾವರ್ಗಗಳು ಅಥವಾ ಪ್ರಸ್ತರಗಳು ಯಾವುದಾದರೂ ನಿರ್ದಿಷ್ಟ ದಿಕ್ಕಿನಲ್ಲಿ ಹರಡಿರುತ್ತವೆ. ಇದೇ ಆ ಶಿಲೆಯ ಹರವು. ಪ್ರಸ್ತರಗಳು ಮಟ್ಟವಾಗಿರಬಹುದು. ಇಲ್ಲವೆ ಭೂಮಟ್ಟಕ್ಕೆ ಓರೆಯಾಗಿಯೊ ವಾಲಿಕೊಂಡೊ ಇರಬಹುದು. ಈ ಕೋನಕ್ಕೆ ಇಳಿವೋರೆ (ಡಿಪ್) ಎಂದು ಹೆಸರು. ಹರವಿಗೆ ಲಂಬ ದಿಶೆಯಲ್ಲಿ ಇಳಿವೋರೆ ಸ್ಪಷ್ಟವಾಗಿ ಕಂಡುಬರುತ್ತದೆ. ಇಳಿವೋರೆಯನ್ನು ಪ್ರವಣಮಾಪಕ (ಕ್ಲೈನೊಮೀಟರ್) ಎಂಬ ಉಪಕರಣದಿಂದ ಅಳೆಯುತ್ತಾರೆ. ಪ್ರವಣಮಾಪಕ ದಿಕ್ಸೂಚಿಯ (ಕ್ಲೈನೊಮೀಟರ್ ಕಂಪಾಸ್) ಸಹಾಯದಿಂದ ಇಳಿವೋರೆಯ ದಿಶೆಯನ್ನೂ ತಿಳಿಯಬಹುದು. ಇಳಿವೋರೆಯ ಇತಿಮಿತಿ, ನಿರೂಪಣೆ ಮುಂತಾದವನ್ನು ಭೂವೈಜ್ಞಾನಿಕ ನಕ್ಷೆಯ ಮೇಲೆ ನಮೂದಿಸಿರಲಾಗುತ್ತದೆ.

	ಒಂದು ಶಿಲಾವರ್ಗವನ್ನು ಮತ್ತೊಂದು ಶಿಲಾವರ್ಗದಿಂದ ಬೇರ್ಪಡಿಸುವ ರೇಖೆಗೆ ಮೇರೆ ಅಥವಾ ಸೀಮಾರೇಖೆ ಎಂದು ಹೆಸರು. ಇದು ನಿರ್ದಿಷ್ಟವಾಗಿ ಕಂಡುಬಂದಲ್ಲಿ ಒಂದೇ ರೇಖೆಯಿಂದಲೂ ಅಸ್ಪಷ್ಟವಾಗಿ ತೋರಿಬಂದಲ್ಲಿ ಖಂಡರೇಖೆಯಿಂದಲೂ ಗುರುತಿಸಲಾಗುತ್ತದೆ.

	ಶಿಲೆಗಳು ಸಾಮಾನ್ಯವಾಗಿ ನೆಲದ ಒಳಗೆ ಹುದುಗಿರುತ್ತವೆ. ಕ್ರಮೇಣ ಉಂಟಾಗುವ ಭೂಸವೆತದಿಂದ ಮೇಲಿರುವ ಭೂಭಾಗ ಕೊಚ್ಚಿಹೋಗಿ ಆ ಶಿಲಾಕೃತಿಯ ಸ್ವಲ್ಪ ಭಾಗ ಮಾತ್ರ ಗೋಚರಿಸುತ್ತದೆ. ಈ ಭಾಗಕ್ಕೆ ಹೊರಚಾಚು (ಔಟ್‍ಕ್ರಾಪ್) ಎಂದು ಹೆಸರು. ಮೇಲುಭಾಗದಲ್ಲಿ ಆಕೃತಿ ಕಿರಿದಾಗಿದ್ದರೂ ಒಳಭಾಗದಲ್ಲಿ ಬೃಹದಾಕಾರ ತಳೆದಿರಬಹುದು. ಹೆಚ್ಚು ಮಳೆಯಾಗುವ ಭೂ ಪ್ರದೇಶಗಳಲ್ಲಿ ಬಲುಭಾಗ ದಟ್ಟೈಸಿ ಬೆಳೆದ ಗಿಡಗಳ ಸಲುವಾಗೂ ಮಣ್ಣಿನಿಂದ ಮುಚ್ಚಿಹೋಗಿರುವುದರ ಸಲುವಾಗೂ ಶಿಲೆಗಳ ಕಿರಿದಾದ ಹೊರಚಾಚುಗಳು ಮಾತ್ರ ಗೋಚರವಾಗುತ್ತವೆ. ಆಂಧ್ರಪ್ರದೇಶದ ಭೂವೈe್ಞÁನಿಕ ನಕ್ಷೆಯ ಒಟ್ಟು ವಿಸ್ತೀರ್ಣದಲ್ಲಿ ನೂರಕ್ಕೆ ಒಂದು ಭಾಗದಷ್ಟು ಮಾತ್ರ ಹೊರಚಾಚುಗಳು ಕಂಡುಬರಬಹುದು. ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಹೀಗಿರದೆ ಅಧಿಕ ಪ್ರಮಾಣದಲ್ಲಿ ಶಿಲಾಕೃತಿಗಳ ಹೊರಚಾಚುಗಳು ಕಂಡುಬರುತ್ತವೆ.

	ಸಾಮಾನ್ಯವಾಗಿ ನಕ್ಷೆಯೊಂದಿಗೆ ಆ ಪ್ರದೇಶದ ಶಿಲೆಗಳ ಪ್ರತೀಕಗಳ ಪಟ್ಟಿಯೊಂದನ್ನು ಒದಗಿಸಿರುವುದೂ ಉಂಟು. ನಕ್ಷೆಯ ಅಂಚಿನಲ್ಲಿ ಇದನ್ನು ಬರೆಯುವುದು ವಾಡಿಕೆ. ಇದಕ್ಕೆ ನಕ್ಷೆಯ ವೃತ್ತಾಂತ (ಲೆಜೆಂಟ್) ಎಂದು ಹೆಸರು. ಒಂದೊಂದು ಶಿಲೆಗೂ ಒಂದೊಂದು ನಿರ್ದಿಷ್ಟ ಪ್ರತೀಕ ಉಂಟು. ಶಿಲಾಪ್ರತೀಕಗಳನ್ನು ಚಿತ್ರ(1)ಲ್ಲಿ ತೋರಿಸಿದೆ. ಕೆಲವು ಸಂದರ್ಭಗಳಲ್ಲಿ ಈ ಪ್ರತೀಕಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಆದರೂ ಆಗಬಹುದು.
ಶಿಲೆಗಳ ರಚನೆಗಳನ್ನು ಗುರುತಿಸಲು ಹಲವು ಪ್ರತೀಕಗಳನ್ನು ಭೂವೈe್ಞÁನಿಕ ನಕ್ಷೆಗಳಲ್ಲಿ ಬಳಸುತ್ತಾರೆ. ಇವನ್ನು ಚಿತ್ರದ(2)ಲ್ಲಿ ಸೂಚಿಸಿದೆ. 
		ಸೀಮಾರೇಖೆ
	ಹರವು ಮತ್ತು ಇಳಿವೋರೆ
(	ಮಟ್ಟ ಶಿಲಾಸ್ತರಗಳು
	ನೀಳ ಸ್ತರಗಳು
	
   	ಕೆಳಮಡಿಕೆ
((	ಮೇಲ್ಮಡಿಕೆ
ಆ	ಸ್ತರಭಂಗದ ಆ = ಕೆಳಎಸೆತ U=ಮೇಲೆಸೆತ
U
	ಸ್ತರಭಂಗದ ಇಳಿವೋರೆ
	

	ಇದೇ ರೀತಿ ಪ್ರಸ್ತರಶಿಲೆಗಳ ವಿವಿಧ ಕಲ್ಪಗಳನ್ನು ಗುರುತಿಸಲು ಕೆಲವು ಪ್ರತೀಕಗಳನ್ನು ಬಳಸುವುದು ರೂಢಿ. ಅವು ಹೀಗಿವೆ:
		ಪ್ಲೀಸ್ಟೋಸೀನ್		. . . 		ಕಿ 
		ಪ್ಲಿಯೊಸೀನ್		. . .		ಖಿಠಿಟ
		ಮಯೊಸೀನ್		. . .  		ಖಿm
		ಆಲಿಗೊಸೀನ್		. . .		ಖಿo
		ಇಯೊಸೀನ್		. . .		ಖಿe		
		ಪೇಲಿಯೊಸೀನ್		. . .		ಖಿಠಿ
		ಕ್ರಿಟೇಷಸ್		. . . 		ಏ
		ಜ್ಯುರಾಸಿಕ್		. . .		ಎ
		ಟ್ರಯಾಸಿಕ್		. . .		ಖಿಡಿ
		ಪರ್ಮಿಯನ್		. . .		ಅಠಿm
		ಪೆನ್‍ಸಿಲ್‍ವೇನಿಯನ್	. . .		ಅಠಿ
		ಮಿಸಿಸಿಪಿಯನ್		. . . 		ಅm 
		ಡಿವೋನಿಯನ್		. . .		ಆ
		ಸೈಲೂರಿಯನ್		. . .		S
		ಆರ್ಡೊವೀಸಿಯನ್	. . .		ಔ	
		ಕೇಂಬ್ರಿಯನ್		. . .		(
		ಪ್ರೀಕೇಂಬ್ರಿಯನ್		. . .		P(

	ಕೆಲವು ವೇಳೆ ಪ್ರತೀಕಾಕ್ಷರಗಳ ಬದಲು ವಿವಿಧ ಕಲ್ಪಗಳ ಶಿಲೆಗಳನ್ನು ಬೇರೆ ಬೇರೆ ಬಣ್ಣಗಳಿಂದಲೂ ನಕ್ಷೆಯ ಮೇಲೆ ಸೂಚಿಸುವುದಿದೆ. ಅಗ್ನಿಶಿಲೆಗಳನ್ನು ನಮೂದಿಸಲು ಯಾವ ಬಗೆಯ ನಿರ್ದಿಷ್ಟ ಬಣ್ಣವೂ ಇಲ್ಲ. ಆದರೆ ಅವನ್ನು ಸೂಚಿಸುವ ಬಣ್ಣಗಳು ಉಳಿದವಕ್ಕಿಂತ ಹೆಚ್ಚು ಶುದ್ಧವಾಗಿಯೂ ಅಧಿಕ ಹೊಳಪಿನಿಂದಲೂ ಕೂಡಿರುತ್ತವೆ.

	ಒಂದು ಪ್ರದೇಶದ ಭೂವೈe್ಞÁನಿಕ ನಕ್ಷೆಯನ್ನು ಸಮರ್ಪಕವಾಗಿ ತಯಾರಿಸುವುದು ಕಷ್ಟಸಾಧ್ಯ ಕೆಲಸ. ಇದರ ತಯಾರಕನಿಗೆ ಭೂವಿe್ಞÁನದಲ್ಲಿ ಉತ್ತಮ ಪರಿಶ್ರಮವಿರಬೇಕು. ಕಾಡುಮೇಡುಗಳು, ಬೆಟ್ಟಗುಡ್ಡಗಳು ಇವುಗಳ ಸ್ಥಳಪರಿಚಯ ಇದ್ದು ಅಂಥಲ್ಲಿ ಸಂಚಾರ ಮಾಡಬೇಕಾಗುತ್ತದೆ. ಆತ ಜನಸಂಪರ್ಕವಿಲ್ಲದ ನಿಬಿಡಾರಣ್ಯಗಳಲ್ಲಿ ಡೇರೆಯಲ್ಲೇ ಹಲವು ಬಾರಿ ಉಳಿಯುವ ಸಂದರ್ಭಗಳೂ ಬರಬಹುದು.

	ನಕಾಸೆಯ ತಯಾರಿಕೆಗೆ ಅಗತ್ಯವಾಗಿ ಬೇಕಾದ ಸಲಕರಣೆಗಳು: ಪ್ರವಣಮಾಪಕ ಮತ್ತು ದಿಕ್ಸೂಚಿ ಅಥವಾ ಪ್ರವಣಸೂಚಕ ದಿಕ್ಸೂಚಿ, ಭೂಭಾಗದ ಮೇಲ್ಮೈನಕ್ಷೆಯ ಹಾಳೆ (ಟೋಪೊಷೀಟ್), ಶಿಲೆಗಳ ಭೌತಪರಿಶೀಲನೆಗೆ ಸುತ್ತಿಗೆ, ಉಬ್ಬುಮಸೂರ, ಚಾಕು, ದ್ರಾವಕ, ಬಣ್ಣದ ಪೆನ್ಸಿಲುಗಳು, ಟಿಪ್ಪಣಿಪುಸ್ತಕ, ಅಳತೆಪಟ್ಟಿ ಮತ್ತು ಕೋನಮಾಪಕ. ಇವಲ್ಲದೆ ಬಿಡಾರ ಹೂಡಲು ಡೇರೆ ಮತ್ತು ಸಹಾಯಕರು.

	ಭೂನಕ್ಷೆ ತಯಾರಿಸುವ ಮೊದಲು ಮೇಲ್ಮೈನಕ್ಷೆ ಹಾಳೆಯ ಮೇಲೆ ನಿರ್ದಿಷ್ಟ ವಿಸ್ತೀರ್ಣವನ್ನು ಗುರುತಿಸಿಕೊಳ್ಳಬೇಕು. ನಾಲ್ಕಾರು ಬಾರಿ ಆ ಪ್ರದೇಶದಲ್ಲಿ ಸಂಚರಿಸಿ ಅಲ್ಲಿ ಕಂಡುಬರುವ ವಿವಿಧ ಶಿಲೆಗಳನ್ನೂ ಅವುಗಳ ರಚನೆಯನ್ನೂ ವಿವರವಾಗಿ ಪರಿಶೀಲಿಸಿ ಅವುಗಳ ಪೂರ್ವಪರಿಚಯ ಮಾಡಿಕೊಳ್ಳಬೇಕು. ಇದಾದ ಅನಂತರ ಶಿಲಾಭ್ಯಾಸವನ್ನು ಯಾವುದಾದರೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಪ್ರಾರಂಭಿಸಿ ನಿರ್ದಿಷ್ಟ ದಿಕ್ಕುಗಳಲ್ಲಿ ಮುಂದುವರಿಯುತ್ತ ಮಾರ್ಗಮಧ್ಯದಲ್ಲಿ ಗೋಚರಿಸುವ ಶಿಲೆಗಳನ್ನು ನಿರ್ದಿಷ್ಟ ಮಾನಕಕ್ಕೆ (ಸ್ಕೇಲ್) ಅನುಸಾರವಾಗಿ ಟೋಪೊಷೀಟಿನ ಮೇಲ್ಭಾಗದಲ್ಲಿ ಅದರ ಪ್ರತಿಯ ಮೇಲಾಗಲಿ ಗುರುತು ಮಾಡಬೇಕು. ಪ್ರತಿಯೊಂದು ಶಿಲಾವರ್ಗದ ಮೇರೆಗಳು, ಅವುಗಳ ಪರಸ್ಪರ ಸಂಬಂಧ, ರಚನಾವೈವಿಧ್ಯ, ಹರವು, ಇಳಿವೋರೆ ಮುಂತಾದವನ್ನೆಲ್ಲ ವಿವರವಾಗಿ ಪರಿಶೀಲಿಸಿ ಆಯಾ ಸ್ಥಳಗಳಲ್ಲಿ ಪರಿಗಣಿತ ಪ್ರತೀಕಗಳ ಸಹಾಯದಿಂದ ನಿಖರವಾಗಿ ಗುರುತಿಸಬೇಕು. ಹೀಗೆ ಹಲವಾರು ದಿಕ್ಕುಗಳಲ್ಲಿ ಶಿಲೆಗಳನ್ನು ಗುರುತಿಸಿದ ಮೇಲೆ ಒಂದೇ ವರ್ಗಕ್ಕೆ ಸೇರುವ ಶಿಲೆಗಳ ಜಾಡನ್ನು ನಕ್ಷೆಯ ಮೇಲೆ ಚಿತ್ರಿಸಬೇಕು. ಈ ಕ್ರಮದಲ್ಲಿ ಆಯ್ಕೆಮಾಡಿಕೊಂಡಿರುವ ಇಡೀ ಪ್ರದೇಶವನ್ನು ಗುರುತಿಸಿಕೊಂಡಲ್ಲಿ ಅಲ್ಲಿಯ ಉತ್ತಮ ಭೂವೈe್ಞÁನಿಕ ನಕ್ಷೆಯ ಸಹಾಯದಿಂದ ತಿಳಿದುಕೊಳ್ಳಬಹುದು. ಇಂಥ ನಕ್ಷೆಗಳು ಗಣಿಗಾರಿಕೆ, ಸುರಂಗಕೊರೆತ, ಜಲಾಶಯ ನಿರ್ಮಾಣ, ಸೇತುವೆ ನಿರ್ಮಾಣ- ಇವೇ ಮುಂತಾದವುಗಳಲ್ಲಿ ಬಲು ಉಪಯುಕ್ತವಾಗುತ್ತವೆ. ಈಚಿನ ವರ್ಷಗಳಲ್ಲಿ ಟೋಪೊಷೀಟುಗಳ ಬದಲಿಗೆ ವಿಮಾನ ಹಾರಾಟಗಳಿಂದ ತೆಗೆದ ಆಕಾಶ ಛಾಯಾಚಿತ್ರಗಳನ್ನೂ ಭೂಮಿಯನ್ನು ಪರಿಭ್ರಮಿಸುವ ಕೃತಕ ಭೂಉಪಗ್ರಹಗಳಿಂದ ತೆಗೆದ ಛಾಯಾಚಿತ್ರಗಳನ್ನೂ ಬಳಸಿ ಭೂವೈe್ಞÁನಿಕ ನಕ್ಷೆಗಳನ್ನು ರಚಿಸಲಾಗುತ್ತದೆ.
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ